ಕರ್ಪೂರದ ಗೊಂಬೆ
ನಾಗರ ಹಾವು ಆರ್. ಎನ್. ಜಯಗೋಪಾಲ್
ವಿಜಯಭಾಸ್ಕರ್
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು || ಪ ||
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದೆ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ || ೧ ||
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನ ನಾ ಪಡೆದೆ ಧನ್ಯೆ ನಾ ನಿಜದಿ || ೨ ||
ನಾಗರ ಹಾವು
ಚಿತ್ರ ನೋಡಿ